top of page

ಏರ್ವಾಡಿ ಇಬ್ರಾಹೀಂ ಬಾದುಷಃ (ರ)

Samshudden

May 31, 2024

ದ್ಸುಲ್‌ಖ‌ಅದ್ 23, ದಕ್ಷಿಣ ಭಾರತದ ಪ್ರಸಿದ್ಧ ಝಿಯಾರತ್ ಕೇಂದ್ರ ಹಾಗೂ ನೊಂದವರ ಪಾಲಿನ ಆಶಾಕಿರಣವಾದ ಏರ್ವಾಡಿ ಇಬ್ರಾಹೀಂ ಬಾದುಷಃ (ರ) ಶಹೀದಾದ ದಿನ.


ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ 18 ನೇ ಪೌತ್ರರಾಗಿ ಗವರ್ನರ್ ಮುಹಮ್ಮದ್ ಬಾದುಷಃ ಹಾಗೂ ಫಾತಿಮಾ ದಂಪತಿಗಳ ಮಗನಾಗಿ ಮಕ್ಕಾದಲ್ಲಿ ಜನಿಸಿದರು. ಬಾಲ್ಯದಲ್ಲೇ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡಿದ್ದ ಇಬ್ರಾಹೀಂ ಬಾದುಷ (ರ), ತನ್ನ ಒಂಭತ್ತನೇ ವಯಸ್ಸಿನಲ್ಲಿ ಖುರ್‌ಆನ್ ಕಂಠಪಾಠ ಮಾಡಿದರು. ಪುಣ್ಯ ಮದೀನದಲ್ಲಿ ಧಾರ್ಮಿಕ ವಿಧ್ಯಾಬ್ಯಾಸ ಕರಗತ ಮಾಡಿ, ಇಮಾಮರಾಗಿ ಸೇವೆ ಸಲ್ಲಿಸಿದರು. ಸಾತ್ವಿಕ ಮಹಿಳೆಯಾದ ಝೈನಬಾ ಎಂಬವರನ್ನು ವಿವಾಹವಾದರು. ಈ ದಂಪತಿಗಳಿಂದ ಅಬೂತ್ವಾಹಿರ್ ಹಾಗೂ ಇಸ್ಲಾಖ್ ಎಂಬ ಎರಡು ಮಕ್ಕಳನ್ನು ಅಲ್ಲಾಹನು ಕರುಣಿಸಿದ.


ಪೈಗಂಬ‌ರ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಆದೇಶದಂತೆ ಪಶ್ಚಿಮ ಭಾರತದ ಸಿಂಧ್, ಗುಜರಾತ್ ಪ್ರಾಂತ್ಯಗಳಲ್ಲಿ ಒಂದೆರಡು ವರ್ಷಗಳ ಕಾಲ ಪ್ರಭೋಧನೆಗೈದರು.


ಮದೀನಾಗೆ ಮರಳಿದ ಇಬ್ರಾಹೀಂ ಬಾದುಷಾರೊಂದಿಗೆ ನಿರಂಕುಶ ಪ್ರಭುತ್ವದಿಂದ ಕಂಗೆಟ್ಟಿದ್ದ ದಕ್ಷಿಣ ಭಾರತದ ಪಾಂಡ್ಯರ ರಾಜ್ಯಕ್ಕೆ ತೆರಳುವಂತೆ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಆಜ್ಞಾಪಿಸಿದರು. ಅದರಂತೆ ತುರ್ಕಿಯ ಸುಲ್ತಾನನ ಸೈನಿಕ ಬಲದೊಂದಿಗೆ ಸಮುದ್ರಯಾನದ ಮೂಲಕ ತಮಿಳುನಾಡು ತಲುಪಿದ ಇಬ್ರಾಹೀಂ ಬಾದುಷಾಃ (ರ) ಹಾಗೂ ಅನುಚರರು ಏರ್ವಾಡಿ ಕೇಂದ್ರವಾಗಿಟ್ಟು ಶಾಂತಿಯುತ ಧರ್ಮ ಪ್ರಭೋಧನೆಯಲ್ಲಿ ನಿರತರಾದರು. ಇದನ್ನು ಸಹಿಸದ ಪಾಂಡ್ಯ ರಾಜರು, ಇಬ್ರಾಹೀಂ ಬಾದುಷಾಃ (ರ) ರನ್ನು ತಡೆಯುವಲ್ಲಿ ಕೈಸುಟ್ಟುಕೊಂಡು ವಿವಿಧೆಡೆ ತನ್ನ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು. ಇದರಿಂದ ಇಬ್ರಾಹೀಂ ಬಾದುಷಾಃ (ರ) ರವರು ಏರ್ವಾಡಿ ಸೇರಿದಂತೆ ಹಲವೆಡೆ 12 ವರ್ಷಗಳ ಕಾಲ ಸುಲ್ತಾನರಾಗಿ ಮಾದರಿಯೋಗ್ಯ ಆಡಳಿತ ನಡೆಸಿ ಜನಮೆಚ್ಚುಗೆಗೆ ಪಾತ್ರರಾದರು.


ಕೊನೆಗೆ ಪಾಂಡ್ಯ ರಾಜನ ಕುತಂತ್ರಕ್ಕೆ ಬಲಿಯಾಗಿ ದ್ಸುಲ್‌ಖ‌ಅದ್ 23 ಮಗ್ರಿಬಿನ ಸಮಯ ಮಹಾನುಭಾವರು ಶಹೀದಾದರು.

bottom of page