ಪೂರ್ವಾಧುನಿಕ ಕಾಲದ (pre modern) ಇಸ್ಲಾಮಿಕ್ ದೈವಶಾಸ್ತ್ರದ ವಿಕಾಸ ಮತ್ತು ಪರಿಣಾಮಕ್ಕೆ ಸಂಬಂಧಿಸಿದ ಬಹುಮುಖ್ಯ ಚರ್ಚೆಗಳನ್ನಾಗಿವೆ 'ಕ್ಲಾಸಿಕಲ್ ಇಸ್ಲಾಮಿಕ್ ಥಿಯಾಲಜಿ' ಎಂಬ ಈ ಕೃತಿ ವಿಶ್ಲೇಷಿಸುವುದು. ಧಾರ್ಮಿಕ ಇತಿಹಾಸದಲ್ಲಿಯೂ, ಏಕ ದೈವ ನಂಬಿಕೆಯ ನೈಜ ಹಕ್ಕುದಾರ ಎಂಬ ನೆಲೆಗಟ್ಟಿನಲ್ಲೂ ಇಸ್ಲಾಮಿನ ಪ್ರಸ್ತುತತೆ ಗಣನೆಗೆ ತೆಗೆದುಕೊಳ್ಳುವಾಗ ಈ ಕೃತಿಯ ಅನಿವಾರ್ಯತೆಯ ಕುರಿತು ಹೆಚ್ಚಿಗೆ ಹೇಳಬೇಕಾಗಿಲ್ಲ. ಏಕ ದೈವ ನಂಬಿಕೆಯ ಆಧಾರದಲ್ಲಿ ಇಸ್ಲಾಮಿಕ್ ದೈವಶಾಸ್ತ್ರದ ಮಹತ್ವ ಇಸ್ಲಾಂ ಧರ್ಮದ ಪ್ರಸ್ತುತತೆಯನ್ನೇ ಪ್ರತಿಫಲಿಸುತ್ತದೆ. ಆ ಮೂಲಕ ನವೀನ ವಿಧಾನಶಾಸ್ತ್ರವೊಂದರ ಅನುಸಂಧಾನವನ್ನು ಇಸ್ಲಾಮ್ ಪ್ರಸ್ತುತಪಡಿಸುತ್ತದೆ.
ಇತ್ತೀಚೀನವರೆಗೆ ಇಸ್ಲಾಮಿಕ್ ಆದ್ಯಯನ ಕ್ಷೇತ್ರಗಳಲ್ಲಿ ದೈವಶಾಸ್ತ್ರ ಅಧ್ಯಯನ, ವಿಶೇಷವಾಗಿ ಪಾಶ್ಚಿಮಾತ್ಯರ ಮಧ್ಯೆ ಕಡಿಮೆಯಾಗಿತ್ತು. ಇಸ್ಲಾಮಿಕ್ ನಾಗರಿಕತೆಯಲ್ಲಿ ಅರಳಿದ 'ಮೆಟಾಫಿಸಿಕ್ಸ್' (ಅತಿ ಭೌತಶಾಸ್ತ್ರ) ಕೂಡಾ ಅರೆಬಿಕ್ ತತ್ವಜ್ಞಾನದ ಮೂಲಕ ಉದ್ಭವಿಸಿದ್ದಾಗಿದೆ ಎಂಬ ತಿಳುವಳಿಕೆ ವ್ಯಾಪಕವಾಗಿತ್ತು. ಅದಾಗ್ಯೂ ಕಳೆದ ಎರಡು ಶತಮಾನಗಳಿಂದ ಪ್ರಾಚೀನ ಕೃತಿಗಳ ಮರುಮುದ್ರಣದೊಂದಿಗೆ ಈ ಕ್ಷೇತ್ರದಲ್ಲಿ ನಡೆಯುತ್ತಿರುವ ವಿದ್ವಾಂಸರ ಉತ್ಸಾಹಶೀಲ ಮಧ್ಯಸ್ಥಿಕೆಗಳು ಇಸ್ಲಾಮಿಕ್ ದೈವಶಾಸ್ತ್ರದ ಅಧ್ಯಯನಕ್ಕೆ ಹೊಸ ಆಯಾಮ ನಿರ್ಣಯಿಸಿದೆ. ಅದರ ಫಲವಾಗಿ ಇಸ್ಲಾಮಿಕ್ ದೈವಶಾಸ್ತ್ರ ಕೇವಲ ಒಂದು ವಾದ ಎಂಬ ತಪ್ಪು ಕಲ್ಪನೆಯು ತಿರುಚಲ್ಪಟ್ಟಿತು. ಆ ಮೂಲಕ ಧರ್ಮಶಾಸ್ತ್ರವನ್ನು (ತಿಯಾಲಜಿ) ಗ್ರೀಕ್ ಭೂಮಿಯಿಂದ ಅಭ್ಯಸಿಸುವ ಬದಲು ಕುರ್ಆನ್ ಅವತೀರ್ಣದ ಉಪಉತ್ಪನ್ನವಾಗಿ ಸಮೀಪಿಸಲು ಪ್ರಾರಂಭಿಸಿದರು. ಅದೇ ರೀತಿ ಕ್ಲಾಸಿಕಲ್ ಮುಸ್ಲಿಂ ನಾಗರಿಕತೆಯ ಮೌಲ್ಯಗಳೆಲ್ಲವೂ ಪಾಶ್ಚಿಮಾತ್ಯರನ್ನು ಸ್ವಾಧೀನಿಸಿದೆ ಎಂಬ ತಿಳುವಳಿಕೆಯೂ ಅಪ್ರಸ್ತುತವಾಗ ತೊಡಗಿತು. ಪ್ರಸ್ತುತ ಅಧ್ಯಯನಗಳ ಪ್ರಕಾರ ಮುಸಲ್ಮಾನರು ಕೇವಲ ಗ್ರೀಕ್, ಅಲಕ್ಸಾಂಡ್ರಿಯಾ ಪರಂಪರೆಯನ್ನು ಯುರೋಪಿಗೆ ಮರಳಿಸಿದ ತಂತ್ರಶಾಲಿಗಳಾದ ಮಧ್ಯವರ್ತಿಗಳು ಮಾತ್ರವಾಗಿದ್ದಾರೆ.
ಈ ಅವಧಿಯಲ್ಲಿ ಇಲ್ಮುಲ್ ಕಲಾಮ್ ಅಕಾಡೆಮಿಕ್ ವಲಯಗಳಲ್ಲಿ ತನ್ನ ಸ್ಥಾನ ಭದ್ರಗೊಳಿಸಿತು. ಆದರೆ ಇದು ದೈವಶಾಸ್ತ್ರದ ಪರ್ಯಾಯ ಅಧ್ಯಯನ ಶಾಖೆಯಾಗಿ ಪರಿಚಯಿಸಿದ್ದಾಗಿರಲಿಲ್ಲ. ವಿಲಿಯಮ್ ಸಿ ಚಿಟಿಕ್ ಅಭಿಪ್ರಾಯ ಪ್ರಕಾರ, ವ್ಯತಿರಿಕ್ತ ರೀತಿಯಲ್ಲಿರುವ ಆಧ್ಯಾತ್ಮಿಕ ಮಾತುಕತೆಯಾಗಿದೆ ದೈವಶಾಸ್ತ್ರ. ಪ್ರಸ್ತುತ ಶಾಖೆಗಳ ಪೈಕಿ ಆಧ್ಯಾತ್ಮಿಕತೆಯನ್ನು ಹೆಚ್ಚು ಪ್ರತಿಬಿಂಬಿಸುವ ಸೂಫಿಸಂ ಪ್ರಮುಖವಾದುದು. ಮಧ್ಯಕಾಲೀನ ಸಂಸ್ಕೃತಿಗಳ ಪೈಕಿ ದೈವಶಾಸ್ತ್ರದ ಅಡಿಯಲ್ಲಿ ಬರುವ ಸೃಷ್ಟಿ , ದೈವಾಸ್ತಿತ್ವ , ಆಧ್ಯಾತ್ಮಿಕ ಚಿಕಿತ್ಸೆ , ಅಲೌಕಿಕತೆ ಮುಂತಾದ ಕ್ಲಿಷ್ಟಕರ ಚರ್ಚೆಗಳನ್ನು ಸೂಫಿಸಂ ಆಳ ಅಧ್ಯಯನಕ್ಕೊಡ್ಡಿತು. ಇತರ ಏಕ ದೈವ ಸಿದ್ಧಾಂತಗಳಿಗಿಂತ ಭಿನ್ನವಾಗಿ ಆಧ್ಯಾತಿಕ ದೃಷ್ಟಿ ಎಂಬ ನೆಲೆಯಲ್ಲಿ ಸೂಫಿಸಂ ಅತಿ ವೇಗದಿಂದ ಸಮಾಜದ ಮುಖ್ಯವಾಹಿನಿಯಲ್ಲಿ ಬೇರೂರಿತು. ಕಾರಣ, ಖುರ್ಆನಿನ ಮೂಲ ಸಿದ್ಧಾಂತದೊಂದಿಗಿನ ಪೂರ್ಣ ಬೆಂಬಲದ ಫಲ ಎನ್ನಬಹುದು. ಯುಕ್ತಿರಹಿತ ಚಿಂತನೆಗಳು ಮೊಳಕೆಯೊಡೆಯಲಾರಂಭಿಸಿದ ಅವಧಿಯಲ್ಲಿಯೇ ತರ್ಕಶಾಸ್ತ್ರ ವಿದ್ವಾಂಸರು ತಮ್ಮ ಅಧ್ಯಯನದಲ್ಲಿ ಸೂಫೀ ಮಾರ್ಗವನ್ನು ಅನುಕರಣೆ ಮಾಡಲಾರಂಭಿಸಿದರು. ಇಮಾಮ್ ಗಝಾಲಿ (ರ) ರವರು ಅದಕ್ಕಿರುವ ಸೂಕ್ತ ಉದಾಹರಣೆ. ಅವರ ಹಿಂಬಾಲಕರೂ, ಅಗ್ರೇಸ ತರ್ಕಶಾಸ್ತ್ರಜ್ಞರೂ ಆದ ಪ್ರಮುಖ ಆಶ್ಅರೀ ವಿದ್ವಾಂಸ ಇಮಾಮ್ ರಾಝೀ (ರ)ರವರು ಸೂಫೀ ಸಂಶೋಧನಾ ವಿಧಾನವನ್ನು ತಮ್ಮ ಕೃತಿಗಳಲ್ಲಿ ಅನುಕರಿಸಿದ್ದಾಗಿ ಗೋಚರಿಸುತ್ತದೆ.
ಇಮಾಮ್ ಗಝಾಲಿಯವರು ತಮ್ಮ ಇಹ್ಯಾ ಗ್ರಂಥದಲ್ಲಿ ಇಂದ್ರಿಯಗೋಚರ ಜ್ಞಾನ ಮತ್ತು ಅತೀಂದ್ರಿಯ ಜ್ಞಾನ ಶಾಖೆಗಳನ್ನು ಸಂಯೋಜಿಸಲು ಶ್ರಮಿಸುತ್ತಾರೆ. ಈ ಅಧ್ಯಯನವು ಪ್ರಾಥಮಿಕವಾಗಿ ವಿರೋಧಾಭಾಸ ಹೊಂದಿದ್ದ ಎರಡು ಜ್ಞಾನಶಾಖೆಗಳ ನಡುವಿನ ಅಂತರವನ್ನು ಇಲ್ಲವಾಗಿಸಿತು. ಇಲ್ಲಿ ಇಬ್ನ್ ಅರಬಿಯವರ ಮಧ್ಯಸ್ಥಿಕತೆ ಅಪಾರವಾದುದು. ಆ ಮುಲಕ ತತ್ವಶಾಸ್ತ್ರ, ಸೂಫಿಸಂ, ಕರ್ಮಶಾಸ್ತ್ರ, ತತ್ವಜ್ಞಾನ ಮುಂತಾದ ವ್ಯತಿರಿಕ್ತ ಜ್ಞಾನ ಶಾಖೆಗಳನ್ನು ಒಂದುಗೂಡಿಸಿ ಹೊಸ ಮಿಸ್ಟಿಕಲ್ ಥಿಯಾಲಜಿಗೆ (ಆಧ್ಯಾತ್ಮಿಕ ದೈವಶಾಸ್ತ್ರ) ಅವರು ಅಡಿಗಲ್ಲು ಹಾಕಿದರು. ಆದ್ದರಿಂದಲೇ ಇಬ್ನ್ ಅರಬಿಯ ನಂತರದ ಇಸ್ಲಾಮಿಕ್ ದಾರ್ಶನಿಕ ಇತಿಹಾಸವನ್ನು ಅವರ ಕೃತಿಗಳ ಟಿಪ್ಪಣಿಗಳಾಗಿ ಗ್ರಹಿಸುವುದು. ಪುರಾತನತೆಯಿಂದ (Late Antiquity - 4th - 6th cent. CE ) ಬಳುವಳಿ ಪಡೆದ ದೈವಶಾಸ್ತ್ರವನ್ನು ಆವಾಹಿಸಿದ ಇನ್ನೊಂದು ಅಧ್ಯಯನ ಶಾಖೆಯಾಗಿತ್ತು 'ಫಲ್‘ಸಫಾ' ( ತತ್ವಾಶಾಸ್ತ್ರ). ಮಧ್ಯಕಾಲೀನ ವಿದ್ವಾಂಸರಂತೆ ಆಧುನಿಕ ವಿದ್ವಾಂಸರೂ ತತ್ವಶಾಸ್ತ್ರ ಮತ್ತು ತರ್ಕಶಾಸ್ತ್ರದ ನಡುವಿನ ಅಂತರ ದೃಢೀಕರಿಸಲು ಶ್ರಮಿಸಿದರು. ಆದಾಗ್ಯೂ ಕೆಲವೊಂದು ತತ್ವಶಾಸ್ತ್ರ ವಿದ್ವಾಂಸರ ನಂಬಿಕೆಯ ಆಧಾರದಲ್ಲಿ ಅದನ್ನೂ ಇಸ್ಲಾಮಿನೊಂದಿಗೆ ಸೇರಿಸಿ ಓದಲು ಪ್ರಾರಂಭಿಸಿದರು. ಜ್ಞಾನ ಶಾಖೆಗಳಿಗೆ ಗಡಿರೇಖೆ ನಿರ್ಧರಿಸುವ ಅಧ್ಯಯನ ವಿಧಾನಗಳಿಗೆ (Disciplinary study) ಮಧ್ಯಕಾಲೀನ ಮುಸಲ್ಮಾನರು ನಾಂದಿ ಹಾಡಿದರು. ಇದರ ಒಳಹೊಕ್ಕು ಪಾಶ್ಚಾತ್ಯ ಇಸ್ಲಾಮನ್ನು ಓದುವಾಗ, ದೈವಶಾಸ್ತ್ರದ ಹಲವು ವ್ಯವಸ್ಥಿತ ಅಧ್ಯಯನ ಶಾಖೆಗಳಲ್ಲಿ ಇಸ್ಲಾಮಿನ ವ್ಯವಹಾರಗಳ ಮಾಹಿತಿಯನ್ನು ನಿರ್ಲಕ್ಷಿಸಿದ್ದಾಗಿ ಕಾಣಬಹುದು. ಆ ಮೂಲಕ ಅಪೂರ್ಣ ಜ್ಞಾನ ಶಾಖೆಗಳು ಮಾತ್ರ ಪಾಶ್ಚಿಮಾತ್ಯ ಓದುಗರಿಗೆ ತಲುಪಿದ ಕಾರಣ ಮುಸ್ಲಿಂ ಏಕದೈವ ಸಿದ್ಧಾಂತದ ಅನನ್ಯ ಮುಖಗಳು ನಿರ್ಲಕ್ಷ್ಯಕ್ಕೊಳಗಾದವು.
ಹಿನ್ನೆಲೆ: [sat of field]
ಪಾಶ್ಚಾತ್ಯ ಇಸ್ಲಾಮಿಕ್ ಅಧ್ಯಯನ ಕ್ಷೇತ್ರವಾದ ಓರಿಯಂಟಲಿಸಂ ಮುಂದಿಟ್ಟ ಇಸ್ಲಾಮಿನ ಸಂಕುಚಿತ ಓದಿಗೆ ವಿವಿಧ ಜ್ಞಾನಶಾಖೆಗಳನ್ನು ಸಂಯೋಜಿಸಿದ ದೈವವಶಾಸ್ತ್ರದೊಂದಿಗಿನ ಸಾಮೀಪ್ಯ (Inter - disciplinary Approach) ಪರಿಹಾರವಾಗಿತ್ತು. ಪ್ರಸ್ತುತ ಅಧ್ಯಯನ ಶಾಖೆಗಳು ಮದ್ಹಬ್‘ಗಳಿಗಿಂತಲೂ ವ್ಯಕ್ತಿಗತವಾಗಿ ಹೆಚ್ಚು ಪ್ರಚುರತೆ ಪಡೆಯಿತು. ಅಪರಿಚಿತವಾಗಿದ್ದ ಹಲವು ಮೂಲ ಕೃತಿಗಳನ್ನು ಅಭ್ಯಸಿಸುವುದರೊಂದಿಗೆ ವಿಶೇಷವಾಗಿ ಅಶ್ಅರೀ, ಗಝಾಲಿ, ಮಾತುರೀದಿ, ರಾಝೀ (ರ) ಮುಂತಾದ ಪ್ರಮುಖ ಚಿಂತಕರ ಕುರಿತಾದ ಅಧ್ಯಯನಗಳನ್ನು ಪರಿಚಯುಸುವಲ್ಲಿಯೂ ಹಲವು ಯುವ ವಿದ್ವಾಂಸರು ಆಸ್ಥೆ ವಹಿಸಿದರು. ಆದಾಗ್ಯೂ ಈ ಕುರಿತಾದ ಸಂಪೂರ್ಣ ಅಧ್ಯಯನ ಪಾಶ್ಚಾತ್ಯರಿಗೆ ಲಭಿಸಿಲ್ಲ ಎನ್ನುವಷ್ಟು ವಿರಳ. ಹೆನ್ರಿ ಕೋರ್ಬಿನ್, ಹುಸೈನ್ ಸಾಯಿ ಮುಂತಾದವರ ಶ್ರಮದ ಫಲವೆಂಬಂತೆ ಇತ್ತೀಚೆಗೆ ಇಸ್ಲಾಮಿಕ್ ಫಿಲಾಸಫಿಯ ಪ್ರಾಮುಖ್ಯತೆ ಪಾಶ್ಚಿಮಾತ್ಯರೆಡೆಯಲ್ಲಿ ಪ್ರಚುರಗೊಂಡಿತೇ ಹೊರತು ತರ್ಕಶಾಸ್ತ್ರದ ಪ್ರಸ್ತುತತೆ ಹದಿಮೂರನೆಯ ಶತಮಾನದ ನಂತರ ಅಷ್ಟಾಗಿ ಅಧ್ಯಯನಕ್ಕೊಳಪಡಲಿಲ್ಲ. ಅತೀಂದ್ರಿಯ ದೈವಾಸ್ಥಿತ್ವವನ್ನು ಪರಿಚಯಿಸುವ ಕುರ್ಆನಿನ ಪ್ರಸ್ತಾವನೆಯನ್ನು ಆಳ ಅಧ್ಯಯನದೊಂದಿಗೆ ತಿಳಿಯಪಡಿಸುವಲ್ಲಿ ತರ್ಕಶಾಸ್ತ್ರ ಪಂಡಿತರ ಕೊಡುಗೆ ಅಪಾರ. ಸೃಷ್ಟಿಕರ್ತನ ಇರುವಿಕೆಯ ನಂಬಿಕೆಯನ್ನು ಇನ್ನೊಂದು ಹಂತದಲ್ಲಿ ಸೂಫಿಗಳು ಗಟ್ಟಿಗೊಳಿಸಲಾರಂಭಿಸಿದರು. ಇಂದು ಈ ಎರಡೂ ಶಾಖೆಗಳಲ್ಲಿ ಪ್ರವೀಣರಾಗಿದ್ದ ವಿದ್ವಾಂಸರ ಕೊಡುಗೆಗಳ ಅನ್ವೇಷಣೆ ಅನಿವಾರ್ಯವಾಗಿದೆ. ಆದ್ದರಿಂದಲೇ, ಇಮಾಮ್ ಗಝಾಲೀ (ರ) ರವರು 'ಹುಜ್ಜತುಲ್ ಇಸ್ಲಾಮ್' (ಧರ್ಮದ ಪುರಾವೆ) ಎಂದೂ, ಇಬ್ನ್ ಅರಬೀ 'ಶೈಖುಲ್ ಅಕ್ಬರ್' ಎಂದೂ ಜನಜನಿತರಾದದ್ದು. ಇವರು ಸ್ಪಷ್ಟ ಏಕತ್ವವನ್ನು ಜನರಿಗೆ ತಿಳಿಯಪಡಿಸಲು ಹಲವಾರು ವ್ಯತಿರಿಕ್ತ ಅಧ್ಯಯನ ಶಾಖೆಗಳ ಮೊರೆ ಹೋದರು. ಅವರ ಎಲ್ಲಾ ಅಧ್ಯಯನಗಳ ಕೇಂದ್ರ ಬಿಂದು ಕುರ್ಆನ್ ಆಗಿತ್ತು ಎಂಬುದು ಗಮನಾರ್ಹ.
ಇತಿಹಾಸದ ಬಹು ಮುಖ್ಯ ಸಾಂಸ್ಕೃತಿಕ ಕೊಡುಕೊಳ್ಳುವಿಕೆಗೆ ಅಬ್ಬಾಸಿಯ್ಯಾ ಆಡಳಿತ ಸಾಕ್ಷಿಯಾಯಿತು. ಕೇವಲ ತದ್ದೇಶೀಯ ಬರಹಗಳನ್ನು ಮಾತ್ರ ಅಂಗೀಕರಿಸುತ್ತಾ ಬಂದ ಜನರು ಗ್ರೀಕ್ ಮೊದಲಾದ ಕಡೆಗಳಲ್ಲಿ ನಡೆದ ಏಕದೈವಾಸ್ತಿತ್ವದ ಅಧ್ಯಯನಗಳ ಮೇಲೆ ಬೆಳಕು ಚೆಲ್ಲಲಾರಂಭಿಸಿದರು. ಇಸ್ಲಾಮಿಕ್, ಅರಿಸ್ಟೋಟಲಿಯನ್, ನಿಯೋ ಪ್ಲಾಟಾನಿಕ್ ಮುಂತಾದ ತತ್ವಗಳ ಕಾಲ್ಪನಿಕ ಸಮಾನತೆಗಿರುವ ಚರ್ಚೆಯ ದಾರಿ ತೆರೆದು ಸಾಂಪ್ರದಾಯಿಕತೆಯನ್ನು ಇಲ್ಲವಾಗಿಸುವುದಾಗಿರಲಿಲ್ಲ ಇಲ್ಲಿನ ಉದ್ದೇಶ. ಹೊರತಾಗಿ, ಈ ಅಧ್ಯಯನ ಶಾಖೆಯ ವಿಶಾಲ ಮಿತಿಯನ್ನು ಪ್ರಕಟಿಸುವುದಾಗಿತ್ತು. ಹದಿಮೂರನೆಯ ಶತಮಾನದ ಮದ್ಯದಲ್ಲಿ ಹುಟ್ಟು ಪಡೆದ ಇಬ್ನ್ ಅರಬಿಯ ಚಿಂತನೆಗಳನ್ನು ಹೊರತುಪಡಿಸಿದರೆ ಇಸ್ಲಾಮಿಕ್ ತತ್ವಶಾಸ್ತ್ರ ಅಧ್ಯಯನ ಸರಣಿಯಲ್ಲಿ 'ಇಬ್ನ್ ಸೀನಾ'ರ ಚಿಂತನಾ ಪ್ರಭಾವ ಸಾಟಿಯಿಲ್ಲದ್ದಾಗಿದೆ. ಫಿಲಾಸಫಿಯ ಕೆಲ ತಾತ್ವಿಕತೆಗಳು ಸುನ್ನೀ ಮುಸಲ್ಮಾನರ ಮೂಲ ದೈವಾಸ್ತಿತ್ವ ವಾದದೊಂದಿಗೆ ವೈರುಧ್ಯ ಹೊಂದುವುದರೊಂದಿಗೆ, ಮೂಲ ನಂಬಿಕೆಯ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದೆ ಎಂಬ ಕಾರಣಕ್ಕಾಗಿ ಕೆಲ ಅಂತರಗಳನ್ನು ಕಾಯ್ದುಕೊಂಡರು. ಶಾಶ್ವತ ಜಗತ್ತು ಎಂಬ ಗ್ರೀಕ್ ನಂಬಿಕೆಯ ಮುಂದೆ ಇಸ್ಲಾಮಿನ ಶೂನ್ಯತೆಯಿಂದ ಸೃಷ್ಟಿಯ ಉಗಮ ಎಂಬ ವಾದವು ತೀರಾ ಭಿನ್ನವಾಗಿತ್ತು. ಕುರ್ಆನ್ ವಿರುದ್ಧ ಮತ್ತು ಅತಿಲೌಕಿಕತೆಯ (Metaphysics) ಈ ವಾದವನ್ನು ಇಮಾಮ್ ಗಝಾಲೀ ತಮ್ಮ ತಹಾತುಫುಲ್ ಫಲಾಸಿಫಾ ಎಂಬ ಗ್ರಂಥದಲ್ಲಿ ಸಂಪೂರ್ಣವಾಗಿ ಅಲ್ಲಗಳೆದರು. ಇಸ್ಲಾಮಿಕ್ ದಾರ್ಶನಿಕತೆಯಲ್ಲಿನ ಕೆಲವೊಂದು ತಪ್ಪು ಗ್ರಹಿಕೆಗಳನ್ನು ಇಲ್ಲವಾಗಿಸಲು ಬೇಕಾಗಿ ತರ್ಕಶಾಸ್ತ್ರ ವಿದ್ವಾಂಸರು ಶ್ರಮಿಸಿದರು. ಒಂದು ವ್ಯವಸ್ಥಿತ ಶಾಖೆಯಾಗಿ ರೂಪಗೊಂಡ ಬಳಿಕ ತರ್ಕಶಾಸ್ತ್ರ ಕಾಲಹರಣಗೊಳ್ಳದೆ ಶಾಶ್ವತವಾಗಿ ಉಳಿಯಿತು. ಇಂತಹಾ ಅಪೂರ್ವ ವಿಚಾರಗಳ ಮೇಲಿನ ಅಧ್ಯಯನಗಳು ಇನ್ನೂ ಹೆಚ್ಚಿನ ಮಟ್ಟಿನಲ್ಲಿ ನಡೆಯಬೇಕಿದೆ. ಆ ನಿಟ್ಟಿನಲ್ಲಿ ಅಬ್ದುಲ್ ಹಕೀಮ್ ಮುರಾದ್ ಸಹಿತವಿರುವ ಜಾಗತಿಕ ವಿದ್ವಾಂಸರ ಈ ರೀತಿಯ ಶ್ರಮ ಒಂದು ಹೊಸ ಮೈಲಿಗಲ್ಲಾಗಿದೆ ಎಂಬುವುದು ವಾಸ್ತವ.
ಮೂಲ: ಅಬ್ದುಲ್ ಹಕೀಮ್ ಮುರಾದ್
ಕನ್ನಡಕ್ಕೆ: ಅಬ್ದುಸ್ಸಲಾಂ ಮುಈನಿ ಮಿತ್ತರಾಜೆ, ಸಾಲೆತ್ತೂರು
Comentários