top of page
Writer's pictureAshiq Gandibagilu

ಟೈಗ್ರೀಸ್ ನದಿ ತಟದಲ್ಲಿ ನಿರ್ಮಾಣಗೊಂಡ ಇತಿಹಾಸ



ಚರಿತ್ರೆಯಲ್ಲಿ ವಿಶೇಷ ಸ್ಥಾನ ಪಡೆದ ಇಸ್ಲಾಮಿಕ್ ನಗರಗಳಲ್ಲೊಂದು ಬಾಗ್ದಾದ್. ಇಸ್ಲಾಮಿಕ್ ಚರಿತ್ರೆ ಪುಟಗಳಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದ್ದು ಅನೇಕ ಬದಲಾವಣೆಗೆ ಈ ನಗರವು ದೃಕ್ಷಾಕ್ಷಿಯಾಗಿದೆ. ಖಿಲಾಫತ್ ಆಡಳಿತ ಕಾಲದ ಪ್ರಮುಖ ಕೇಂದ್ರವಾಗಿತ್ತು. ಬಾಗ್ದಾದ್ ನಗರ ವಿಶೇಷ ವಾಗಿ ವಿಜ್ಞಾನ, ಕಲೆ ,ಸಾಹಿತ್ಯದಲ್ಲಿ ಜಗತ್ತಿಗೆ ಹೊಸ ಬೆಳಕನ್ನು ಚೆಲ್ಲಿದೆ. ಪ್ರಮುಖವಾಗಿ ಅಬ್ಬಾಸಿ ಖಿಲಾಫತ್ ಅವಧಿಯಲ್ಲಿ ಬಾಗ್ದಾದ್ ನಗರ ನಿರ್ಮಾಣಗೊಂಡು ಜಗತ್ತಿನ ಭೂಪಟದಲ್ಲಿ ಸ್ವರ್ಣನಗರಿಯಾಗಿ ವಿರಾಜಸಿ, ತನ್ನ ಒಡಲಲ್ಲಿ ಸಂಗ್ರಹಿಸಿದ ಸರ್ವ ವಿಧ ಸಂಪತ್ತನ್ನು ಜಗತ್ತಿನ ನಾನಾ ಭಾಗಕ್ಕೆ ಪಸರಿಸಿದೆ.


ಬಾಗ್ದಾದ್ ನಗರ ನಿರ್ಮಾಣ

ಹಿ. 132 ವರ್ಷಗಳಲ್ಲಿ ಉಮವಿಯ್ಯಾ ಖಿಲಾಫತಿನಲ್ಲಿ ಉಂಟಾದ ರಾಜಕೀಯ ಅಸ್ಥಿರತೆ ಜನರಲ್ಲಿ ವಿರೋಧ ಭಾವವನ್ನು ಉಂಟು ಮಾಡಿತು. ಅದೇ ವೇಳೆ ಅಬ್ಬಾಸ್ (ರ.ಅ) ವಂಶಸ್ಥರು ಕೂಫಾದಲ್ಲಿ ಸ್ವತಃ ಖಿಲಾಫತನ್ನು ಘೋಷಿಸಿದರು. ಆದರೆ ಕೂಫಾದ ಜನರು ಈ ವಂಶಸ್ಥರನ್ನು ವಿರೋಧಿಸಿ ಅಲಿಯ್ಯ್ ಬಿನ್ ಅಬಿತಾಲಿಬರ ಕುಟುಂಬಕ್ಕೆ ಬೆಂಬಲ ಸೂಚಿಸಿದರು. ಅಬ್ಬಾಸಿ ಖಿಲಾಫತ್ತಿನ ಮೊದಲ ಖಲೀಫ ಅಬುಲ್ ಅಬ್ಬಾಸ್ ಅಬ್ದುಲ್ಲಾ ಸಫ್ಫಾಹ್ ಕೂಫಾದಿಂದ ಹೈರಾ ನಗರಕ್ಕೆ ಪಲಾಯನ ಮಾಡಿದರು. ಹೈರಾ ನಗರದಲ್ಲಿ ಸುರಕ್ಷತೆ ಕೊರತೆಯಿಂದ ಅಂಬಾರ್ ನಗರಕ್ಕೆ ಪಲಾಯನ ಮಾಡಿದರು. ಸಫ್ಫಾಹ್ ತನ್ನ ಸಹೋದರ ಅಬೂ ಜಅಫರ್ ಅಬ್ದುಲ್ಲಾ ಹಿಲ್ ಮನ್ಸೂರರಿಗೆ ತನ್ನ ಅಧಿಕಾರವನ್ನು ಹಸ್ತಾಂತರಿಸಿದರು.


ಅಂಬಾರ್ ನಗರದಲ್ಲಿ ಸುಭದ್ರತೆ ಮತ್ತು ಸುರಕ್ಷತೆಯ ಕೊರತೆ ಖಲಿಫರಿಗೆ ಮನದಟ್ಟಾಗಿ ಖಲಿಫರು ಹಿ. 136 ರಲ್ಲಿ ಟೈಗ್ರೀಸ್ ನದಿಯ ಪಕ್ಕದಲ್ಲಿ ಹೊಸ ನಗರ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಿದರು. ಅದುವೇ ಬಗ್ದಾದ್ .


ಶತ್ರುಗಳ ದಾಳಿಯಿಂದ ಸಂರಕ್ಷಿಸಲು ಅತ್ಯಂತ ಸುರಕ್ಷಿತ ನಗರವಾಗಿತ್ತು ಬಗ್ದಾದ್. ಆಡಳಿತ ನಿರ್ವಹಿಸಲು ಮತ್ತು ಜೀವನೋಪಾಯಕ್ಕೆ ಬಗ್ದಾದ್ ಸಮೃದ್ಧಿಯ ತಾಣವಾಗಿತ್ತು. ಖಲೀಫ ಮನ್ಸೂರ್ ಈ ನಗರಕ್ಕೆ ಮದೀನತ್ತುಸ್ಸಲಾಂ (ಸುರಕ್ಷಿತ ನಗರ) ಎಂದು ಹೆಸರಿಟ್ಟರು.


ಬಗ್ದಾದ್ ಪದದ ಅರ್ಥ ಬುಸ್ತಾನುಲ್ಲಾಹ್ (ಅಲ್ಲಾಹನ ತೋಟ) ಬಗ್=ತೋಟ, ದಾದ್= ಅಲ್ಲಾಹ್ ಬಗ್+ದಾದ್ ಒಟ್ಟು ಸೇರಿಸಿದರೆ ಬಗ್ದಾದ್ ಎಂದಾಯಿತು. ಬಗ್ದಾದ್ ನಗರಕ್ಕೆ ಮದೀನತ್ತುಸ್ಸಲಾಂ, ಮದೀನತ್ತುಲ್ ಇಸ್ಲಾಂ, ದಾರುಸ್ಸಲಾಂ, ಮದೀನತ್ತುಲ್ ಮುದವ್ವರ ಎಂಬಿತ್ಯಾದಿ ಹೆಸರುಗಳಿವೆ.


ಬಗ್ದಾದ್ ನಗರ ನಿರ್ಮಾಣ ದ ಸಂದರ್ಭದಲ್ಲಿ ಖಲೀಫಾ ಮನ್ಸೂರ್

بسم الله والحمد للهۖ وٱلْأَرْضَ لِلَّهِ يُورِثُهَا مَن يَشَآءُ مِنْ عِبَادِهِۦ ۖ وَٱلْعَٰقِبَةُ لِلْمُتَّقِينَ

ಹೇಳುತ್ತಾ ತನ್ನ ಸ್ವತಃ ಕೈಯಿಂದಲೇ ಮೊದಲ ಇಟ್ಟಿಗೆ ಇಡುತ್ತಾ 'ಅಲ್ಲಾಹನ ಸಮೃದ್ಧಿಯಲ್ಲಿ ನೀವು ನಿರ್ಮಿಸಿರಿ' ಎಂದು ಹೇಳಿದರು.


ಬಗ್ದಾದ್ ನಗರಕ್ಕೆ ಮದೀನತ್ತುಲ್ ಮುದವ್ವರ ಎಂಬ ಹೆಸರು ಬರಲು ಕಾರಣಗಳಿವೆ. ಬಗ್ದಾದ್ ನಗರವು ವೃತ್ತಾಕಾರದಿಂದ ಆವರಿಸಿದ್ದು ಇದರ ಮಧ್ಯದಲ್ಲಿ ಸುಲ್ತಾನರ ಅರಮನೆ ರಾಜಕುಮಾರರ ಮನೆಗಳು ಕುಟುಂಬಿಕರ ಮನೆಗಳು ಮಾರ್ಕೆಟ್ಗಳು ಮೇಲೆ ನಿಂತಿತ್ತು.


ಬಗ್ದಾದ್ ನಗರದಲ್ಲಿ ಪ್ರಮುಖವಾಗಿ ನಾಲ್ಕು ಗಡಿಗಳಿಗೆ ಸೇರುವ ನಾಲ್ಕು ಪ್ರಮುಖ ಹೆದ್ದಾರಿಗಳು ಸುತ್ತುವರಿದಿದ್ದವು. ಇವುಗಳಿಗೆ ಇತರ ಉಪ ರಸ್ತೆಗಳು ಸೇರಿಕೊಂಡಿದ್ದವು. ಈ ಹೆದ್ದಾರಿ ನಿರ್ಮಾಣಕ್ಕೆ ವಿವಿಧ ಭಾಗಗಳಿಂದ ಸುಮಾರು ಒಂದು ಲಕ್ಷ ಕಾರ್ಮಿಕರು ಪಾಲ್ಗೊಂಡಿದ್ದರು. ಇದಕ್ಕೆ ಬೇಕಾಗಿ ಸುಲ್ತಾನರು ಅಂದಿನ ಕಾಲದ ಒಂದು ಕೋಟಿ 80 ಲಕ್ಷ ಹಣವನ್ನು ವಿನಿಯೋಗಿಸಿದರು.


ಅಬ್ಬಾಸಿ ಖಲೀಫರ ಪ್ರೋತ್ಸಾಹದಿಂದ ಬಗ್ದಾದ್ ನಗರವು ವಿಜ್ಞಾನ, ಕಲೆ, ಸಾಹಿತ್ಯದಲ್ಲಿ ಉತ್ತುಂಗಕ್ಕೇರಿದ್ದು ಇಂದಿಗೂ ತನ್ನ ಸಾಂಸ್ಕೃತಿಕ ಹಿರಿಮೆಯನ್ನು , ಪೂರ್ವಿಕರ ಚರಿತ್ರೆಯನ್ನು ಮತ್ತೆ ಮತ್ತೆ ನೆನಪಿಸುತ್ತಿದೆ.


~ ಮುಹಮ್ಮದ್ ಆಶಿಕ್ ಗಂಡಿಬಾಗಿಲು

104 views0 comments

Comments


bottom of page