top of page

ಅನ್ವಾರುಲ್ ಬಸ್ವರ್ ಬಿ ಅಕಾಬಿರಿಲ್ ಬದ್ರ್: ಮಲಬಾರಿಗರೊಬ್ಬರ ಚೊಚ್ಚಲ ಬದ್ರ್ ಕಾವ್ಯ

Updated: Jun 11


ಅನ್ವಾರುಲ್ ಬಸ್ವರ್ ಬಿ ಅಕಾಬಿರಿಲ್ ಬದ್ರ್:ಮಲಬಾರಿಗರೊಬ್ಬರ ಚೊಚ್ಚಲ ಬದ್ರ್ ಕಾವ್ಯ
ಅನ್ವಾರುಲ್ ಬಸ್ವರ್ ಬಿ ಅಕಾಬಿರಿಲ್ ಬದ್ರ್:ಮಲಬಾರಿಗರೊಬ್ಬರ ಚೊಚ್ಚಲ ಬದ್ರ್ ಕಾವ್ಯ

ಕೇರಳೀಯ ಮುಸ್ಲಿಂ ವಿದ್ವಾಂಸರ ಕೃತಿಗಳಲ್ಲಿ‌ ಪ್ರಸಿದ್ಧಿ ಪಡೆದ ಅತ್ಯಂತ ಹಳೆಯ ಬದ್ರ್ ಕಾವ್ಯವಾಗಿದೆ (ಬದ್ರ್ ಪಾಟ್) ಅನ್ವಾರುಲ್ ಬಸ್ವರ್ ಬಿ ಅಕಾಬಿರಿಲ್ ಬದ್ರ್. ಇನ್ನೂರು ವರ್ಷಗಳ ಹಿಂದೆ‌ ಹಿಜರ.1248/ಕ್ರಿ.1833 ದುಲ್ಹಿಜ್ಜ ತಿಂಗಳಲ್ಲಿ ಈ ಕಾವ್ಯ ರಚನೆ ಪೂರ್ಣಗೊಳ್ಳುತ್ತದೆ. ಅಥವಾ ಮೋಯಿನ್ ಕುಟ್ಟಿ ವೈದ್ಯರರ ಪಡೆಪ್ಪಾಟ್ (ಸಮರಗೀತೆ)ಗಿಂತಲೂ ಅರ್ಧಶತಮಾನ ಮೊದಲು. ಎರಡು ಸಾವಿರದ ಇಪ್ಪತ್ತೊಂದು ಗೆರೆಗಳನ್ನು ಹೊಂದಿರುವ ಈ ಕೃತಿಯ ರಚನೆಗಾರರು ಕೈಪಟ್ಟ ಅಂಬಲವನ್ ಮೊಯ್ದೀನ್ ಕುಟ್ಟಿ ಮುಸ್ಲಿಯಾರ್.ಹಿ.1204/ಕ್ರಿ.1788 ರಲ್ಲಿ ಕೈಪಟ್ಟ ಅಂಬಲವನ್ ಪುತ್ತನ್ ಪೀಡಿಯಕ್ಕಲ್ ಏನಿಕುಟ್ಟಿ ಮುಸ್ಲಿಯಾರರ ಮಗನಾಗಿ ಜನಿಸುತ್ತಾರೆ. ಅರಬಿ ಸಾಹಿತ್ಯದಲ್ಲಿ ಅಗಾಧ ಜ್ಞಾನವನ್ನು ಹೊಂದಿದ್ದ ಮೊಯ್ದೀನ್ ಕುಟ್ಟಿ ಮುಸ್ಲಿಯಾರ್ ಚರಿತ್ರಕಾರರು, ಸೂಫಿಗಳು, ಕವಿಯು ಹಾಗು ಗ್ರಂಥಕಾರರೂ ಹೌದು. ಮಟ್ಟತ್ತೂರು ಮಸೀದಿ ಹಾಗು ಇನ್ನಿತರ ಹಲವು ಕಡೆಗಳಲ್ಲಿ ಬಹುಕಾಲ ಮುದರ್ರಿಸರಾಗಿ ಸೇವೆ ಸಲ್ಲಿಸಿದ್ದಾರೆ. ವೆಲಿಯಂಗೋಡು ಉಮರ್ ಖಾಝಿಯು ಇವರ ಗುರುವರ್ಯರಲ್ಲೊಬ್ಬರು.


ಬದ್ರ್ ಪಡೆ ಪಾಟ್ಗಳು (ಸಮರಗೀತೆ) ಹೇರಳವಾಗಿ ಹಾಡಲಾಗುತ್ತಿದ್ದ ಕಾಲದಲ್ಲಿ ಅನ್ವಾರುಲ್ ಬಸ್ವರ್ ಕೂಡ ಅದರ ಭಾಗವಾಗಿತ್ತು. 10ನೇ ಶತಮಾನದಲ್ಲಿ ಬದುಕಿದ್ದ ಹುಸೇನ್ ಬಿನ್ ಮುಹಮ್ಮದುಲ್ ದಿಯಾರ್ ಬಕ್ರಿ ರವರ ತಾರಿಕುಲ್ ಖಮೀಸ್ ಫೀ ಅಹ್ವಾಲಿ ಅನ್ಫುಸಿನಫೀಸ್ ಈ ಕೃತಿಯ ಪ್ರಮುಖ ಆಕರ ಗ್ರಂಥ. ಇದಲ್ಲದೆ ಸೀರತುಲ್ ಹಲಬೀಯ್ಯ, ಮವಾಹಿಬುಲ್ಲದುನ್ಯಾ, ಮಿಶ್ಕಾತುಲ್ ಮಸ್ವಾಬೀಹ್ ಮುಂತಾದ ಗ್ರಂಥಗಳನ್ನೂ ಮೊಯ್ದೀನ್ ಕುಟ್ಟಿ ಮುಸ್ಲಿಯಾರ್ ಉಲ್ಲೇಖಿಸಿದ್ದಾರೆ.


ಬದ್ರ್ ಯುದ್ಧದ ಪ್ರತಿ ನಿಮಿಷಗಳನ್ನು ಮನೋಜ್ಞವಾಗಿ ವಿವರಿಸುವ ಈ ಕೃತಿ ಓದುಗರನ್ನು ತುಂಬಾ ಸೆಳೆದುಕೊಳ್ಳುತ್ತದೆ. ನಂತರದ ಕೃತಿಗಳಿಗೆ ಈ ಕೃತಿಯು ಪ್ರೇರಣೆಯಾಯಿತೆನ್ನಬಹುದು. ಒಂದು ಶತಮಾನದವರೆಗೆ ಯಾರೂ ತಿಳಿಯದೆ ನಿಗೂಢವಾಗಿದ್ದ ಈ ಕಾವ್ಯ ಸಂಗ್ರಹವನ್ನು ಬದ್ರುದ್ದುಜಾ ಪಬ್ಲಿಶಿಂಗ್ ಯೂನಿಟ್ ಬಿಡುಗಡೆಗೊಳಿಸಿದೆ.


ಖಿಲಾಫತ್ ಚಳುವಳಿಯ ಪ್ರಮುಖ ಹೋರಾಟಗಾರ ಅಲಿ ಮುಸ್ಲಿಯಾರಂತಹ ಉದ್ದಾಮ ವಿದ್ವಾಂಸರು ದರ್ಸ್(ಅಧ್ಯಾಪನೆ) ನಡೆಸಿದ ತಿರೂರಂಗಾಡಿ ಮಧ್ಯದ ಮಸೀದಿಯಲ್ಲಿ, ಹಾಜಿ ಕುಟ್ಟಿ ಹಸನ್ ಮುಸ್ಲಿಯಾರ್ ದರ್ಸ್ ನಡೆಸುತ್ತಿದ್ದ ಸಂದರ್ಭದಲ್ಲಿ ಅನ್ವಾರುಲ್ ಬಸ್ವರ್ ಆಲಾಪನೆ ನಡೆಸುತ್ತಿದ್ದರು.


‘ಮಾಪಿಳ್ಳೆ ಸಾಹಿತ್ಯತ್ತಿಂಡೆ ಕಾನಾಪುರಂಗಲ್’ಎಂಬ ಪುಸ್ತಕದಲ್ಲಿ ಬಾಲಕೃಷ್ಣನ್ ಪಳ್ಳಿಕುನ್ನು ಅನ್ವಾರುಲ್ ಬಸ್ವರ್ ಕೃತಿಯ ಕುರಿತು ಪರಾಮರ್ಶಿಸುವಾಗ ಅನ್ವಾರುಲ್ ಬಸ್ವರ್ ಐನೂರು ಗೆರಗಳನ್ನು ಹೊಂದಿರುವ ಕೃತಿ ಎಂದಾಗಿದೆ ಉಲ್ಲೇಖಿಸಿರುವುದು. ಎರಡು ಸಾವಿರದ ಇಪ್ಪತೊಂದು ಗೆರೆಗಳಲ್ಲಿ ಮೊಯ್ದೀನ್ ಕುಟ್ಟಿ ಮುಸ್ಲಿಯಾರ್, ಅನ್ವಾರುಲ್ ಬಸ್ವರನ್ನು ಜೋಡಿಸಿರುವುದು ಎಂಬುದಾಗಿದೆ ವಾಸ್ತವ. ಮೊಯ್ದೀನ್ ಕುಟ್ಟಿ ಮುಸ್ಲಿಯಾರರ ಬರಹಗಳು, ಕೃತಿಗಳು ಇವತ್ತು ಎಲ್ಲಿಯೂ ಲಭ್ಯವಿಲ್ಲ. ಅನ್ವಾರುಲ್ ಬಸ್ವರಿನ ಕೆಲವೊಂದು ಬೆರಳೆಣಿಕೆಯ ಕೈ ಪ್ರತಿಗಳು ಮಾತ್ರ ಈಗ ಲಭ್ಯವಿದೆ.


ಅನ್ವಾರುಲ್ ಬಸ್ವರ್ ಮತ್ತು ಮೋಯಿನ್ ಕುಟ್ಟಿ ವೈದ್ಯರ ಪಡಪ್ಪಾಟ್ (ಸಮರಗೀತೆ) ಇದರ ಚರಿತ್ರೆ ರಚನೆಯಲ್ಲಿ ಸಾಮ್ಯತೆಯಿದೆ. ಮೋಯಿನ್ ಕುಟ್ಟಿ ವೈದರ್ ರವರ ಬದ್ರ್ ಪಡಪಾಟ್, ಅನ್ವಾರುಲ್ ಬಸ್ವರನ್ನು ನೇರವಾಗಿ ಮಾಪಿಳ್ಳ ಪಾಟಿಗೆ (ಮಾಪಿಳ್ಳ ಹಾಡು) ಭಾಷಾಂತರಿಸಿದ್ದಾಗಿದೆ.


ನಲವತ್ತ ನಾಲ್ಕನೇ ವಯಸ್ಸಿನಲ್ಲಿ ಮೊಯ್ದೀನ್ ಕುಟ್ಟಿ ಮುಸ್ಲಿಯಾರ್ ಅನ್ವಾರುಲ್ ಬಸ್ವರ್ ರಚನೆಯನ್ನು ಪೂರ್ತಿಗೊಳಿಸಿದರು. 92ನೇ ವಯಸ್ಸಿನಲ್ಲಿ ಹಿಜ್ರ 1297/ಕ್ರಿ 1180 ರಲ್ಲಿ ಮಹಾನುಭಾವರು ನಿಧನರಾದರು. ಕೈಪಟ್ಟ ತೆಕ್ಕೆಪಳ್ಳಿಯ(ದಕ್ಷಿಣದ ಮಸೀದಿ)ಕಬ್ರ್ ಸ್ಥಾನದಲ್ಲಿ ಅವರ ಸಮಾಧಿ ಇದೆ.


~ ಅಮ್ಮಾರ್ ಮುಈನಿ, ನೀರಕಟ್ಟೆ

218 views3 comments

3 Comments


Masha Allah super keep writing....

Like

Mashallah 🌹, i liked this, keep it up,

Write more and more okey.

May Allah bless you to publish your own book, ameen

Like

Informative 💜

Like
bottom of page